ಪ್ರಪಂಚದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಬ್ಬರದಂತಹ ಮುಕೇಶ್ ಅಂಬಾನಿ ಕುಟುಂಬವು ಕೂಡ ಒಂದು.ಇವರು ತಮ್ಮ ಶ್ರೀಮಂತಿಕೆಯಿಂದಲ್ಲೇ ಪ್ರತಿಯೊಬ್ಬರನ್ನು ಅಚ್ಚರಿಯನ್ನುಂಟು ಮಾಡುತ್ತಿರುವ ಇವರು ಬರೋಬ್ಬರಿ 113 ಶತಕೋಟಿ ಡಾಲರ್ ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಮುಕೇಶ್ ಅಂಬಾನಿಯವರು ಹೊಂದಿದ್ದಾರೆ. ಪ್ರಪಂಚದ 11ನೇ ಶ್ರೀಮಂತ ವ್ಯಕ್ತಿ ಅದ ಇವರು ಅಲ್ಟ್ರಾ ಲಕ್ಸುರಿಯಸ್ ಲೈಫ್ ಸ್ಟೈಲ್ ಫಾಲೋ ಮಾಡುತ್ತಾರೆ. ಪ್ರತಿದಿನವೂ ಹೊಸ ಹೊಸ ರೀತಿಯ ಶ್ರೀಮಂತಿಕೆತನವನ್ನು ಅವಲಂಬಿಸುವ ಇವರು ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಮೊದಲನೇ ಸ್ಥಾನದಲ್ಲಿರುವರು.

ಮುಂಬೈ ನಗರದಲ್ಲಿ ಇರುವಂತಹ 15000 ಕೋಟಿ ಮೌಲ್ಯದ ಆಂಟಿಲಿಯಾದಲ್ಲಿ ಇವರ ಕುಟುಂಬವು ವಾಸವಿರುತ್ತದೆ, ಈ ಬಹುಮಾಡಿ ಕಟ್ಟಡದ ಇನ್ನೊಂದು ವಿಶೇಷ ಏನಪ್ಪಾ ಅಂದರೆ ಯಾವುದೇ ಭೂಕಂಪವಾದರೂ ಕೂಡ ಅದರಿಂದ ತಡೆದುಕೊಳ್ಳುವಂತಹ ಸಾಮರ್ಥ್ಯವನ್ನು ಈ ಕಟ್ಟಡವು ಹೊಂದಿದೆ. ಕೋಟಿ ಕೋಟಿ ಐಷಾರಾಮಿ ಕಾರುಗಳಲ್ಲಿ ಓಡಾಡುವಂತಹ ಮುಖೇಶ್ ಅಂಬಾನಿ ಕುಟುಂಬವೂ ತಮ್ಮದೇ ಆದ ವಿಭಿನ್ನ ಜೀವನ ಶೈಲಿಯನ್ನು ಹೊಂದಿದ್ದಾರೆ.

ತಮ್ಮ ಮನೆಯಲ್ಲಿ ನಡೆಯುವಂತಹ ಯಾವುದೇ ಕಾರ್ಯಕ್ರಮ ಆಗಿರಬಹುದು ಪಾರ್ಟಿ ಆಗಿರಬಹುದು ಅಂತಹ ಸಮಾರಂಭಗಳಿಗೆ ಅಂಬಾನಿ ಕುಟುಂಬವೂ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಾರೆ. ಹಾಗೆಯೇ ತಮ್ಮ ಮಕ್ಕಳಾದ ಆಕಾಶ ಅಂಬಾನಿ, ಇಶಾ ಅಂಬಾನಿ ಮತ್ತು ಅನಂತ ಅಂಬಾನಿ ಅವರ ಮದುವೆಗೆ ಮಾಡಿರೋ ಖರ್ಚು ಎಷ್ಟು ಗೊತ್ತಾ ?ಇದನ್ನು ತಿಳಿದುಕೊಳ್ಳಲು ಸಂಪೂರ್ಣವಾಗಿ ಓದಿ…!

1) ಇಶಾ ಅಂಬಾನಿ ಮತ್ತು ಆನಂದ ಪಿರಾಮಲ್:

2018 ರಲ್ಲಿ ನಡೆದ ಇಶಾ ಅಂಬಾನಿ ಮತ್ತು ಆನಂದ ಪಿರಮಲ್ ಅವರ ಅದ್ದೂರಿ ವಿವಾಹಕ್ಕೆ ಮುಖೇಶ್ ಅಂಬಾನಿ ಕುಟುಂಬ ಬರೋಬ್ಬರಿ 830 ಕೋಟಿ ಹಣವನ್ನು ಖರ್ಚು ಮಾಡಿದ್ದರು. ಮದುವೆಯ ಆಮಂತ್ರಣ ಪತ್ರಿಕೆಯೊಂದಕ್ಕೆ ಸರಿಸುಮಾರು 3 ಲಕ್ಷ ರೂ. ಖರ್ಚು ಮಾಡಿದ್ದರು.ಗ್ರ್ಯಾಮಿ ಪ್ರಶಸ್ತಿ-ವಿಜೇತ ಗಾಯಕ/ಗೀತರಚನೆಕಾರ ಬೆಯಾನ್ಸ್ ಮದುವೆಯಲ್ಲಿ ಕಾರ್ಯಕ್ರಮ ನೀಡಲು ಅಂಬಾನಿಗಳು ಅಂದಾಜು ರೂ 33 – 50 ಕೋಟಿಪಾವತಿಸಿದರು. ಮದುವೆಯ ಆಚರಣೆಗಳು ಮೂರು ವಿಭಿನ್ನ ಸ್ಥಳಗಳಲ್ಲಿ ನಡೆಸಲಾಗಿದ್ದು, ನಿಶ್ಚಿತಾರ್ಥ ಸಮಾರಂಭವು ಇಟಲಿ ದೇಶದಲ್ಲಿ ನಡೆಸಲಾಗಿತ್ತು, ಹಾಗೂ ಮದುವೆಯ ಪೂರ್ವ ಸಮಾರಂಭಗಳು ಉದಯಪುರದಲ್ಲಿ ಮತ್ತು ವಿವಾಹವು ಮುಂಬೈ ನಗರದ ಆಂಟಿಲಿಯಾದಲ್ಲಿ ನಡೆಯಿತು. ಮದುವೆಯಲ್ಲಿ ಪ್ರಿಯಾಂಕಾ ಚೋಪ್ರಾ, ಹಿಲರಿ ಕ್ಲಿಂಟನ್, ಗ್ರೀಕ್-ಅಮೆರಿಕನ್ ಲೇಖಕಿ ಅರಿಯಾನಾ ಹಫಿಂಗ್ಟನ್ ಮತ್ತು ಅನೇಕ ಪ್ರಸಿದ್ಧ ಬಾಲಿವುಡ್ ತಾರೆಯರು ಭಾಗವಹಿಸಿದ್ದರು.

2) ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ:

2019 ರಲ್ಲಿ ನಡೆದ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ವಿವಾಹವು ದೇಶದಲ್ಲಿ ನಡೆದ ಅತ್ಯಂತ ಅದ್ದೂರಿಮಯವಾದ ವಿವಾಹವೆಂದು ಪರಿಗಣಿಸಲ್ಪಟ್ಟಿತು.ವಿವಾಹದ ಆಚರಣೆಗಳು ಸೇಂಟ್ ಮೊರಿಟ್ಜ್‌ನಲ್ಲಿ ವಿವಾಹ ಪೂರ್ವ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು ಅಲ್ಲಿ ಚೈನ್ಸ್ಮೋಕರ್ಸ್ ಮತ್ತು ಕೋಲ್ಡ್ಪ್ಲೇನ ಕ್ರಿಸ್ ಮಾರ್ಟಿನ್ ಪ್ರದರ್ಶನ ನೀಡಿದರು. ಇದರ ನಂತರ ಮುಂಬೈನಲ್ಲಿ ನಡೆದ ಇವರ ವಿವಾಹವು ಅತ್ಯಂತ ಸುದ್ದಿಮಯವಾಗಿತ್ತು ಸರಿಸುಮಾರು 1000 ಕೋಟಿಯಲ್ಲಿ ವಿವಾಹ ಸಮಾರಂಭವು ನಡೆದಿದ್ದು ಜಗತ್ತಿನ ಶ್ರೀಮಂತ ವ್ಯಕ್ತಿಗಳೆಲ್ಲಾ ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇನ್ನೊಂದು ವಿಶೇಷ ಏನೆಂದರೆ ಮದುವೆಯ ಆಮಂತ್ರಣ ಪತ್ರಿಕೆಯೊಂದಕ್ಕೆ ಬರೋಬ್ಬರಿ 1.5 ಲಕ್ಷ ಹಣವನ್ನು ಖರ್ಚು ಮಾಡಿದ್ದರು.

3) ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್:

2024 ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಇನ್ನು ನಡೆದಿಲ್ಲ ಆದರೆ ಮಾರ್ಚ್ 1ರಿಂದ 3ರ ವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಪ್ರೀ ವೆಡ್ಡಿಂಗ್ ಇವೆಂಟ್‌ ನೋಡಿಯೇ ಎಲ್ಲರೂ ಬೆರಗಾಗಿದ್ದಾ. ಈ ಪ್ರೀ ವೆಡ್ಡಿಂಗ್ ಇವೆಂಟ್‌ ಸಮಾರಂಭದಲ್ಲಿ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಗಳಾದ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಇವಾಂಕಾ ಟ್ರಂಪ್ ಸೇರಿದಂತೆ ವಿಶ್ವದಾದ್ಯಂತದ ಹಲವಾರು ಪ್ರಮುಖ ವ್ಯಕ್ತಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಐಷಾರಾಮಿ ವ್ಯವಸ್ಥೆಗಳಿಂದಲೇ ಪ್ರತಿಯೊಬ್ಬರನ್ನು ಅಚ್ಚರೆಯನ್ನುಂಟು ಮಾಡಿದಂತಹ ಈ ಪ್ರೀ ವೆಡ್ಡಿಂಗ್ ಇವೆಂಟ್‌ನಲ್ಲಿ ಚಾರ್ಟರ್ಡ್ ಫ್ಲೈಟ್‌ಗಳು, ಐಷಾರಾಮಿ ರೂಮ್, ವಿಶ್ವ ದರ್ಜೆಯ ಬಾಣಸಿಗರು, ಪಿಕ್-ಅಪ್ ಮತ್ತು ಡ್ರಾಪ್-ಆಫ್‌ಗಾಗಿ ದುಬಾರಿ ವಾಹನಗಳನ್ನು ಒದಗಿಸುವ ಮೂಲಕ ಅಂಬಾನಿಗಳು ಐಷಾರಾಮಿ ವಿಷಯದಲ್ಲಿ ತಮ್ಮ ಯಾವಾಗಲೂ ಮುಂದು ಎಂಬುದನ್ನು ಸಾಬೀತುಪಡಿಸಿದರು.

ಏಷ್ಯಾದಲ್ಲಿ ಅತ್ಯಂತ ಶ್ರೀಮಂತ ಕುಟುಂಬದ ಮುಖೇಶ್ ಅಂಬಾನಿ ಅವರ ಕುಟುಂಬವು ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಪೂರ್ವ ವಿವಾಹ ಸಮಾರಂಭಕ್ಕಾಗಿ ಬರೋಬ್ಬರಿ 1260 ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ. ಬಲಮೂಲಗಳ ಪ್ರಕಾರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 2024ರಲ್ಲಿ ಮದುವೆಯಾಗುವ ನಿರೀಕ್ಷೆಯಿದೆ.